

27th November 2025

ಯರಗಟ್ಟಿ : ನೂತನವಾಗಿ ರಚನೆಯಾಗಿರುವ ಯರಗಟ್ಟಿ ಪಟ್ಟಣದಲ್ಲಿ ಪೊಲೀಸ್ ಠಾಣೆಯನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಲಾಗುವುದು ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಭರವಸೆ ನೀಡಿದರು. ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ವಿವಿಧ ಸಂಘಟನೆಗಳು ಹಾಗೂ నాగరిక గోమతిగాళం పిశివు వూటలా ಆರಂಭಿಸುವಂತೆ ಸಲ್ಲಿಸಿದ ಮನವಿಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ತಾಲೂಕಿನ ಸಮಸ್ತ ನಾಗರಿಕರು, ದಲಿತ ಮುಖಂಡರು ಮತ್ತು ರೈತರು ಅದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ, ಸ್ಥಳೀಯ ಪೊಲೀಸ್ ಠಾಣೆಯನ್ನು ಶೀಘ್ರದಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅವರಿಗೆ ಔಪಚಾರಿಕ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ, ದಲಿತಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಪತ್ರಿಕಾ ಮಾಧ್ಯಮದವರು, ನ್ಯಾಯವಾದಿಗಳ
మాజ ಸೈನಿಕರ ಸಮನ್ವಯ ಸಮಿತಿ, ಕೂಲಿ ಕಾರ್ಮಿಕರ ಸಂಘಟನೆಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ ಅವರು, ಯರಗಟ್ಟಿ ತಾಲೂಕಿಗೆ ಈಗಾಗಲೇ ಪೊಲೀಸ್ ಠಾಣೆಯನ್ನು ಮಂಜೂರಾತಿ ನೀಡಲಾಗಿದೆ. ಪ್ರಸ್ತುತ, ಯೋಜನೆ ಆರ್ಥಿಕ ಹಂತದಲ್ಲಿದೆ. ಶಾಸಕ ವಿಶ್ವಾಸ ವೈದ್ಯ ಅವರೊಂದಿಗೆ ಈ ಕುರಿತು ಈಗಾಗಲೇ ಚರ್ಚೆ ನಡೆಸಿದ್ದು, ಡಿಸೆಂಬರ್ ತಿಂಗಳಲ್ಲಿ ನೂತನ ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಫೀಕ ಡಿ.ಕೆ., ದಲಿತ ಮುಖಂಡರಾದ ಸಂತೋಷ ಚನ್ನಮೇತ್ರಿ, ಸುರೇಶ್ ಭಜಂತ್ರಿ, ಹಾಗೂ ವಿಠಲಗೌಡ ದೇವರಡ್ಡಿ, ಆರುಣ ನೀಲಪ್ಪನ್ನವರ, ಫಾರುಕ್ ಅತ್ತಾರ, ಆಬಿದಬೇಗ ಜಮಾದಾರ. ఊరేజు వారి, మంజునాథ బాపరాళ్ళ ಸೋಮು ರೈನಾಪೂರ, ಮಂಜುನಾಥ ಸಿದ್ದನಗೌಡ, ಹಸೇನಸಾಬ ಹುಸೇನಾಯ್ಕರ, ಸೂರಜ ಸಂಗೋಳ್ಳಿ ಸೇರಿದಂತೆ ಆನೇಕ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025